Friday, December 9, 2011

‘ದಿ ಡರ್ಟಿ ಪಿಚ್ಚರ್’?!


ಇವತ್ತು ‘ದಿ ಡರ್ಟಿ ಪಿಕ್ಚರ್’ ಸಿನೆಮಾವನ್ನು ನೋಡಿದೆ. ವಿದ್ಯಾಬಾಲನ್ ಅಭಿನಯಿಸಿದ ಈ ಚಿತ್ರದ ಬಗ್ಗೆ ಬಹಳ ಹೊಗಳಿಕೆಯ ಮಾತುಗಳನ್ನು ಕೇಳಿ ಬಹಳ ದಿನಗಳಿಂದ ಕಾದು ಅಂತೂ ಇವತ್ತು ಆ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ನೋಡಿ ಬಹಳ ನಿರಾಸೆಯಾಯಿತು. ದಕ್ಷಿಣ ಭಾರತದಲ್ಲಿ ತನ್ನ ಮಾದಕ ಅಭಿನಯಕ್ಕೆ ಹೆಸರಾದ ಸಿಲ್ಕ್ ಸ್ಮಿತಾ ಜೀವನಾಧಾರಿತ ಚಿತ್ರ ಎಂದು ಚಿತ್ರೀಕರಣ ಆರಂಭವಾಗುವಾಗ ಹೇಳಿಕೊಳ್ಳುತ್ತಿದ್ದ ಚಿತ್ರ ತಂಡ, ಅದು ಬಿಡುಗಡೆಯಾಗುವ ಸಂದರ್ಭದಲ್ಲಿ, ಇಲ್ಲ... ಇದು ಕೇವಲ ಸಿಲ್ಕ್ ಸ್ಮಿತಾ ರೀತಿಯ ಅಭಿನಯೇತ್ರಿ ಆಗುವ ಆಕಾಂಕ್ಷಿಗಳ ದುರಂತ ಕಥನ ಎಂದರು. ತಾವು ‘ಸೆಕ್ಸ್’ನ್ನೇ ಮಾರ್ಕೇಟಿಂಗ್ ಟೆಕ್ನಿಕ್ ಆಗಿ ಬಳಸುತ್ತೇವೆ ಎಂದೆಲ್ಲಾ ಹೇಳಿದರು. ಆದರೆ ಚಿತ್ರ ಅತ್ತ ಒಂದು ಜೀವನ ಕಥನದ ನಂಬಿಕಾರ್ಹತೆಯನ್ನೂ ಹೊಂದದೆ, ಇತ್ತ ಸಿನೆಮ್ಯಾಟಿಕ್ ಎನ್ನುವಂಥಾ ಮಂತ್ರಮುಗ್ಧವಾಗಿಸುವ ಕಥಾನಕವನ್ನೂ ಹೊಂದದೆ ಸೋಲುತ್ತದೆ.

Monday, November 28, 2011

ಖಾಸಗಿ ಶಾಲೆಗಳೂ ಸೇರಿದಂತೆ ಎಲ್ಲ ಪ್ರಾಥಮಿಕ ಶಾಲೆಗಳೂ ಕನ್ನಡ ಮಾಧ್ಯಮ ಶಾಲೆಗಳೇ ಆಗಬೇಕು


[ಚಿ. ವಿ. ಶ್ರೀನಾಥಶಾಸ್ತ್ರೀಯವರು ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಇದಬೇಕು ಎಂಬುದರ ಕುರಿತಾಗಿ ಬರೆದ ಲೇಖನ]
ಪ್ರಾಥಮಿಕ ಶಿಕ್ಷ್ಷಣವೆಂದರೆ ಮಕ್ಕಳು ತಾವು ನೋಡಿದ, ಓದಿದ ಹಾಗೂ ಕೇಳಿದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು, ಕಲಿತ ವಿಷಯಗಳ ಬಗ್ಗೆ ಆಸಕ್ತಿ ತೋರಿಸುವುದು, ನೆನಪಿನಲ್ಲಿನ ವಿಷಯಗಳನ್ನು ಮನಸ್ಸಿಗೆ ತಂದುಕೊಂಡು ಅವುಗಳ ಬಗ್ಗೆ ಆಲೋಚಿಸುವುದು, ತಾವು ತಿಳಿದ ವಿಚಾರಗಳನ್ನು ಮನಸ್ಸಿಗೆ ತಂದುಕೊಂಡು ಅವುಗಳನ್ನು ಮಥಿಸಿ ಹೊಸ ವಿಚಾರಗಳನ್ನು ಕಂಡುಕೊಳ್ಳುವುದು.

Sunday, November 27, 2011

ಇವತ್ತು ಶಾಲೆಗೆ ರಜೆ!


ಕನ್ನಡ ಶಾಲೆಗಳನ್ನು ಮುಚ್ಚುವ ಕುರಿತಾಗಿ ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾನು ಎಫ಼್.ಟಿ.ಐ.ಐನಲ್ಲಿ ಇದ್ದಾಗ ಅನೇಕ ವರುಷಗಳಿಂದ ಆಗಾಗ ಅದನ್ನು ಮುಚ್ಚಲು ಮಾಡುತ್ತಿದ್ದ ಪ್ರಯತ್ನಗಳನ್ನೂ ಕಂಡಿದ್ದೆನೆ. ಕಾರಣ ಎರಡಕ್ಕೂ ಒಂದೇ ಈ ಸಂಸ್ಥೆಗಳು ಲಾಭದಾಯಕವಲ್ಲ ಎನ್ನುವುದು. ಶಿಕ್ಷಣದಲ್ಲಿ ಲಾಭ ಹುಡುಕುವುದು ಒಂದು ವಿಚಿತ್ರ ಪರಿಸ್ಥಿತಿಯಲ್ಲವೇ?

ಇಂದಿನ ಶಿಕ್ಷಣದ ಪರಿಸ್ಥಿತಿಯೂ ತುಂಬಾ ಬದಲಾಗಿದೆ. ಇತ್ತೀಚೆಗೆ ನಮ್ಮ ಮನೆಗೆ ಬಂದಿದ್ದ ಗೆಳೆಯ ವಸಂತ ಕಜೆಯೊಡನೆ ಇದೇ ಮಾತು ಬಂತು. ಮಾತಾಡುತ್ತಾ ವಸಂತ ಹೇಳಿದ, “ನಾವು ಶಾಲೆಗೆ ಹೋಗುವಾಗ ದಾರಿಯಲ್ಲಿ ಬಿದ್ದು ಸಿಗುತ್ತಿದ್ದ ಹೂವನ್ನು ಎತ್ತಿ ಆಡುತ್ತಿದ್ದೆವು. ಅದರ ರೂಪರೇಷೆಗಳು ನಮಗೆ ಗೊತ್ತಿಲ್ಲದೆಯೇ ನಮ್ಮೊಳಗೆ ಕೂರುತ್ತಿತ್ತು.” ಹೌದು... ಹೀಗೆ ಬಾಲ್ಯದಲ್ಲಿ ನಮ್ಮೊಳಗೆ ಕುಳಿತ ಅನೇಕಾನೇಕ ವಿಷಯಗಳೇ ಮುಂದೆ ಶಾಸ್ತ್ರೀಯ ಅಧ್ಯಯನದ ಸಂದರ್ಭದಲ್ಲಿ ನಮ್ಮನ್ನು ‘ಜಾಣ’ ವಿದ್ಯಾರ್ಥಿಗಳನ್ನಾಗಿಸುತ್ತಿದ್ದ ವಿಷಯಗಳು. ನಾನು ಮಂಗಳೂರಿನಲ್ಲಿ ಓದುತ್ತಿದ್ದ ಕಾಲದ ನೆನಪಾಗುತ್ತದೆ. ನಾನು ಓದಿದ್ದು ಅದ್ಯಾವುದೋ ಸರಕಾರೀ ಶಾಲೆಯಲ್ಲಿ ಅಲ್ಲ. ಸಂತ ಅಲೋಷಿಯಸ್ ಎನ್ನುವ ಒಂದು ಖಾಸಗಿ ಶಾಲೆಯಲ್ಲಿ, ಕಾಲೇಜಿನಲ್ಲಿ. ಆದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಂದಿನ ನಮ್ಮ ಶಿಕ್ಷಣ ಇದೇ ರೀತಿ ಇತ್ತು.

Wednesday, November 16, 2011

The Secret of the Unicorn


Billions of blue blistering barnacles! ಟಿನ್ ಟಿನ್ ಕಥೆ ಆಧರಿತ ಆನಿಮೇಟೆಡ್ ಚಿತ್ರ ಬರ್ತಾ ಇದೆ ಅಂತ ನಾನು ರೋಮಾಂಚನಗೊಂಡೆ. ನನ್ನ ಬಾಲ್ಯದ ಆಪ್ತ ಗೆಳೆಯ, ಬೆಲ್ಜಿಯಂ ದೇಶದ ಟಿನ್ ಟಿನ್ ಒಂದು ಹಾಲಿವುಡ್ ಚಿತ್ರವಾಗಿ ಬಿಡುಗಡೆಯಾಗುತ್ತಿರುವುದು ಈಗ ಅನೇಕ ತಿಂಗಳುಗಳ ಹಿಂದೆ ಈ ಚಿತ್ರದ ಮೊದಲ ಪೋಸ್ಟರ್ ನೋಡಿದಾಗಲೇ ನನಗೆ ತಿಳಿದದ್ದು. ಸುಮಾರು ನಲವತ್ತು-ಐವತ್ತು ಪುಟಗಳಲ್ಲಿ ಹರ್ಜೆ ರೂಪಿಸಿದ ಚಿತ್ರ ಕಥೆಯ ನಾಯಕನೇ ಈ ಬೆಲ್ಜಿಯಂ ದೇಶದ ಅತಿ ಉತ್ಸಾಹಿ ಪತ್ರಕರ್ತ ಟಿನ್ ಟಿನ್. ಪತ್ರಿಕೆಗೆ ಬರೆಯಲು ಕುತೂಹಲಕರವಾದ ಸುದ್ದಿಗಳನ್ನು ಹುಡುಕುವ ಉತ್ಸಾಹದಲ್ಲಿ ಟಿನ್ ಟಿನ್ ಯಾವುದೇ ಸಾಹಸವನ್ನು ಎದುರಿಸಲು ಸಿದ್ಧ. ಇವನಿಗೆ ಫ್ಯಾಂಟಂಥರದ ಮುಖವಾಡ ಇಲ್ಲ. ಸೂಪರ್ ಮ್ಯಾನ್‍ಥರದ ಅತೀಂದ್ರಿಯ ಶಕ್ತಿಗಳಿಲ್ಲ. ಜೇಮ್ಸ್ ಬಾಂಡ್ ರೀತಿ ಇವನ ಸುತ್ತ ಹುಡುಗಿಯರಿಲ್ಲ ಆದರೂ ಮುದ್ದು ಮುಖದ ಟಿನ್ ಟಿನ್ ಮಾಡದಿರುವ ಸಾಹಸವಿಲ್ಲ. ಇಂಥಾ ವಿಶೇಷ ನಾಯಕನ ಕಥೆಯನ್ನು ಹೇಳಲು ಹೊರಟದ್ದು ಜಗತ್ತು ಕಂಡ ಅಪರೂಪದ ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್ ಎನ್ನುವುದು ನನ್ನ ಕಾಯುವಿಕೆಯನ್ನು ಇನ್ನಷ್ಟು ಅಸಹನೀಯವಾಗಿಸಿತು. ಆದರೆ ಕೊನೆಗೂ ಈ ಚಿತ್ರ ಭಾರತದಲ್ಲಿ ಬಿಡುಗಡೆಯಾಗಿ ನಾನು ನೋಡಿದ್ದಾಯ್ತು!

Tuesday, November 1, 2011

ಮಮ್ಮುಟ್ಟಿಯವರೊಂದಿಗೆ ಶಿಕಾರಿ ಕಥೆ


ಶಿಕಾರಿ ಚಿತ್ರದಲ್ಲಿ ಮಮ್ಮುಟ್ಟಿ ಹಾಗೂ ಪೂನಂ ಬಾಜ್ವಾ

ಉದಯವಾಣಿಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಶಿಕಾರಿಯ ನಿರ್ಮಾಣ ಕಥನದ ವಿಸ್ತಾರ ರೂಪ ಇಲ್ಲಿದೆ.

ನಮ್ಮ ಕನಸಿನ ಕೂಸು, `ಶಿಕಾರಿ ಸಿನೆಮಾ ಈಗ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಈ ಸಂದರ್ಭದಲ್ಲಿ ದೀಪಾವಳಿಯ ನೆಪ ಹಿಡಿದು ನಮ್ಮ ಚಿತ್ರದ ಬಗ್ಗೆ, ಮತ್ತು ನಮ್ಮ ನಾಯಕ ನಟ ಮಮ್ಮುಟ್ಟಿಯವರ ಬಗ್ಗೆ ಒಂದು ನಾಲ್ಕು ಮಾತು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನಿಸಿತು. ಹಾಗಾಗಿ ಇಂದು ನಾನು ಇಲ್ಲಿ.